Wednesday, July 28, 2010

Amma

 ಒಂದು ಕಳೆದುಕೊಂಡ ಸಂಜೆಗೆ ಕಳೆದು ಹೋದ ನಾಲ್ಕು ಹೆಜ್ಜೆ ಎದೆಗೊರಗಿದಾಗ ಚಿಮ್ಮಿದ ಒಂದು ಕಣ್ಣೀರು ಒರೆಸಲು ಬಂದ ನಿನ್ನ ಕಿರು ಬೆರಳು ಕೋಟಿ ಮಾತನ್ನು ಮೀಟಿ ನಿಂತ ಮೌನ ಒಂದು ಪ್ರೀತಿ ಹುಟ್ಟಲು ಎಷ್ಟು ಸಾಲದೇ ಹುಡುಗಿ ?????//

ಅಮ್ಮ ಈ ಎರಡೇ ಅಕ್ಷರ ಎಂತಹವರನ್ನು ಸೋಲಿಸುತ್ತದೆ  ಆದರೆ ಅದೇ ಎರಡಕ್ಷರದ ಸಾವು ಅದಕ್ಕಿಂತ ಹೆಚ್ಚಿನ ನೋವನ್ನು ಕೊಡುತ್ತದೆ. ಅಮ್ಮ ನಿನ್ನ ಮಮತೆ, ವಾತ್ಸಲ್ಯಗಳ ಬಗ್ಗೆ ನಾನೇ ಅಲ್ಲ ಆ ಸೃಷ್ಟಿ ಕರ್ತನಿಂದಲೂ ನಿನ್ನ ಬಣ್ಣಿಸಲು ಸಾದ್ಯವಿಲ್ಲ. ದಯವಿಟ್ಟು ಕ್ಷಮಿಸಮ್ಮ ನಿನ್ನ ನಾ ಬಣ್ಣಿಸಲಾರೆ........................
ಅಮ್ಮ ನೀ ತೋರಿಸಿದಂತ ಪ್ರೀತಿ ಮಮತೆ ಇಲ್ಲಿಯವರೆಗೂ ಯಾರಲ್ಲಿಯೂ ಕಂಡಿಲ್ಲ, ನನಗೆ ನನ್ನ ಮೇಲೆ ಬೇಸರ ಪಡುವಷ್ಟು ದಿನಗಳು ಇಷ್ಟು ಬೇಗ ಬಂದುಬಿಡುತ್ತದೆ ಅಂತ ನಾ ಊಹಿಸಿರಲಿಲ್ಲ ಆದರೆ ನನ್ನ ನೋವನ್ನು ಮರೆಸಲು ನೀನು ಇನ್ನೊಬ್ಬಳನ್ನು ನಿನ್ನ ರೂಅಪದಲ್ಲಿ ಕಳಿಸಮ್ಮ ಅಂತಲೂ ನಾ ಕೇಳುವುದಿಲ್ಲ ನೀ ಕೊಟ್ಟ ಪ್ರೀತಿ ಮಮತೆ ಮತ್ತೆ ನಾ  ಯಾರಲ್ಲಿಯೂ ನೋಡಲು ಬಯಸುವುದಿಲ್ಲ, ಅಮ್ಮ ಇಲ್ಲಿರುವುದು ಹುಸಿ ಪ್ರೀತಿ ಇಲ್ಲಿ ಯಾರಿಗೂ ನಾನಾಗಲಿ ನನ್ನ ಭಾವನೆಗಲಾಗಲಿ ಯಾರಿಗೂ ಅರ್ಥವಾಗುತ್ತಿಲ್ಲ, ಎಲ್ಲ ಇದ್ದು ಇಲ್ಲದವನಂತೆ ಇರುವ ನನ್ನ ಪಾಡು ಕಣ್ಣು, ಕಿವಿ, ಬಾಯಿ, ಮೂಗಿಲ್ಲದವನಂತೆ................???????????????
ಅಮ್ಮ ನಿನ್ನ ಅಗಲಿಕೆ ನನ್ನ ದಿನ ದಿನ ಪ್ರತಿಕ್ಷಣ ಕೊಳ್ಳುತ್ತಿದೆ ......................ನಿನ್ನೂರು ಯಾವುದಮ್ಮ????????????????????
ಇಲ್ಲಿ ಪ್ರೀತಿಗೆ ಬೆಲೆ ಕಟ್ಟೋರೆ ಹೆಚ್ಚು ನನ್ನ ಭಾವನೆಗಳಿಗಾಗಲಿ ನನ್ನ ನೋವಿಗಾಗಲಿ ಸ್ಪಂದಿಸುವವರು ಯಾರು ಇಲ್ಲಮ್ಮ ಇಲ್ಲಿ ನಮಗೆ ನಾವೇ ನಮ್ಮವರು ಅಂದುಕೊಂದೋರು ಯಾವತ್ತು ನಮ್ಮವರು ಆಗಲಾರರು, ಹುಟ್ಟು ಹುಟ್ಟುತ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ ದಾಯಾದಿಗಳು ಅನ್ನೋ ಮಾತು ನಾನು ೧೦ ನೇ ತರಗತಿಯಲ್ಲಿ ಓದುವಾಗ ಅರ್ಥ ಆಗಿರಲಿಲ್ಲ ಈಗ ಅರ್ಥ ಆಯ್ತು,ಅಮ್ಮ ಜೀವನ ಇಷ್ಟು ಕಷ್ಟ ಅಂತ ನಿಜವಾಗಲು ನಂಗೆ ಗೊತ್ತಿರ್ಲಿಲ್ಲ 

No comments:

Post a Comment